ಓಶೋ-ಸಂನ್ಯಾಸಿಗಳಾಗುವುದರ ಹಿಂದಿ

BHARATH KUMAR
BHARATH KUMAR
from CHALLAKERE
10 years ago

ಎಂಟನೇಯ ಪ್ರಶ್ನೇ : “  ಓಶೋ ಪ್ರೇಮಿಗಳ ಸಂಖ್ಯೆ ದಿನದಿನವು ಹೆಚ್ಚುತ್ತಿದೆ, ಆದರೂ ಸಮಾಜದ ಬಹುತೇಕರಿಗೆ ಓಶೋರ ಪರಿಚಯವಿರಲಿ, ಅವರಹೆಸರನ್ನು ಸಹ ಕೇಳಿಲ್ಲ ! ಹೀಗೇಕೆ ?” ಹೂಸೋಎವರ್ : ನನ್ನ ಸಹೋದರನೇ ಕೇಳು, ಸಾಕ್ಷಾತ್ ಈಶ್ವರನಿಂದಲೂ ಇದು ಅಸಾಧ್ಯ ! ‘ಹೀಗೇಕೆ’.. ಎಂಬ ಪ್ರಶ್ನೇಯೇ ತಪ್ಪು. ಹೀಗೊಮ್ಮೆ ಯೋಚಿಸು, ಸಾಕ್ಷತ್ ಈಶ್ವರನೇ ಪ್ರತ್ಯಕ್ಷನಾಗಿ ತನ್ನ ಪರಿಚಯಪತ್ರವನ್ನು ತೋರಿಸಿದರೆ , ಜನರಪ್ರತಿಕ್ರಿಯೆ ಹೇಗಿರುತ್ತದೆ ! ಜನರು ತಮ್ಮ-ತಮ್ಮ ಸಮಸ್ಯೆಗಳೊಂದಿಗೆ ಹಾಜಾರಾಗಿ ಬಿಡುತ್ತಾರೆ ! ಯಾರೋ ಹೇಳುವರು : ನಾನು ಊಟ ಮಾಡಿ ಬಹಳದಿನವಾಯಿತೆಂದು ! ಇನ್ಯಾರೋ ಹೇಳವನು ತನ್ನ ಪತ್ನಿ ಓಡಿಹೋಗಿದ್ದಾಳೆಂದು ! ಇನ್ಯಾರಿಗೊ ಧನವಂತನಾಗಬೇಕಿದೆ ! ಇನ್ಯಾರಿಗೊ ರಾಷ್ಟ್ರಪತಿಆಗಬೇಕಿದೆ !...ಇತ್ಯಾದಿ-ಇತ್ಯಾದಿ. ಹೀಗೇಯೆ ಇದೆ ! ….ಹೀಗೇಕೆ, ಎಂಬ ಪ್ರಶ್ನೇಗೆ ಕೇವಲ ಮೂರ್ಖ ಮಾತ್ರ ಉತ್ತರಿಸಬಲ್ಲ. ಒಂಬತ್ತನೇ ಪ್ರಶ್ನೇ : “ ಓಶೋ-ಸಂನ್ಯಾಸಿಗಳಾಗುವುದರ ಹಿಂದಿರುವ ಕಾರಣವೇನು ?” ಹೂಸೋಎವರ್: ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣಗಳಿವೆ, ಒಬ್ಬೊಬ್ಬ ಓಶೋ ಸಂನ್ಯಾಸಿಗಳನ್ನು ಕೇಳುತ್ತ ಹೋಗಿ ಒಬ್ಬೊಬ್ಬರು ಅವರದೇರೀತಿಯಲ್ಲಿ ಅರ್ಥೈಸುವರು. ಇನ್ನು ನನ್ನ ದೃಷ್ಟಿಕೋನದಲ್ಲಿ ಸಂನ್ಯಾಸ ಸ್ವೀಕರಿಸುವುದೆಂದರೆ… ಕೇವಲ ವಸ್ತ್ರ ಬದಲಾವಣೆಯಾಗಲಿ, ಮಾಲೆ ಧರಿಸುವುದೇ ಆಗಲಿ ಓಶೋ-ಸಂನ್ಯಾಸ ಸೀಮಿತವಲ್ಲ—ಆಥವಾ ಕೇವಲ ಆನಂದ, ಸಂಭ್ರಾಮಾಚರಣೆ,ಕಮ್ಯೂನ್ ಜೀವನಕ್ಕೆ ಇದು ಸೀಮೀತವಲ್ಲ. ಇದು ಕೇವಲ ಆರಂಭ ಮಾತ್ರ , ಪೂರ್ವ ತಯಾರಿ ಅಷ್ಟೇ, ನನ್ನ ಮಟ್ಟಿಗೆ ಓಶೋ-ಸಂನ್ಯಾಸ ಇದೇಜಗತ್ತಿನಲ್ಲಿದ್ದುಕೊಂಡು ಪ್ರಭುವಿನ ಅನ್ವೇಷಣೆಯಲ್ಲಿ ನಿರತನಾಗಿರುವುದಕ್ಕೂ ಸೀಮಿತವಲ್ಲ,ಅದು ಇದಕ್ಕಿಂತಲೂ ಹೆಚ್ಚಿನದಾಗಿದೆ. ನಾವು ಈ ಜಗತ್ತಿನಲ್ಲಿದ್ದೇವೆ—ಎಲ್ಲಾ ಜ್ಞಾನಿ, ಎಲ್ಲಾ ಬುದ್ಧ ಪುರುಷರ, ಎಲ್ಲಾ ಸಂತರ ಏಕಾಭಿಪ್ರಾಯ ಏನಂದರೆ – ಅದು ಅವಾಸ್ತವಿಕ ಎಂದು ; ಅದುಭಾಸವಾಗುತ್ತದೆ ಆದರೆ ಇಲ್ಲ, ಏಕೆಂದರೆ ಅದು ನಿರಂತರವಾಗಿ ಬದಲಾಗುತ್ತಿದೆ; ಯಾವುದು ಬದಲಾಗುತ್ತಿದೆಯೋ ಸತ್ಯ ಆಗಲಾರದು, ಯಾವುದುಸತ್ಯವೋ ಅದು ನಿತ್ಯವೂ ಆಗಿದೆ—ಸದೈವವಾಗಿದೆ, ಆದಿ-ಆಂತ್ಯ ರಹಿತ, ಸ್ವಯಂಭು, ಶಾಶ್ವತವಾಗಿದೆ. ಎಲ್ಲಾ ಜಾಗೃತ-ಪುರುಷರ ಅನುಭವ ಏನೆಂದರೆ ಸತ್ಯವು ಇಂದ್ರೀಯಾತೀತ,ಮನ-ವಾಣಿಯ ಆಚಿನದು. ಎಂದರೆ ಇಂದ್ರಿಯಗಳ ಮೂಲಕವಾಗಲಿ,ಮನಸ್ಸಿನ ಮೂಲಕವಾಗಲಿ ಅದನ್ನು ಅರಿಯಲಾಗುವುದಿಲ್ಲ.  ಆದರೆ ಇದೇ ಜಗತ್ತಿಗೆ ಸಮಾನಾಂತರವಾಗಿ ಮತ್ತೊಂದು ಜಗತ್ತೂ ಇದೆ, ಮೂಲತಃ ಈಜಗತ್ತಿನ ಸ್ರೋತ ಇದಾಗಿದೆ ಹಾಗೂ ಆಧಾರವೂ ಆಗಿದೆ…ಇದರಲ್ಲಿ ಈ ಜಗತ್ತು ಪ್ರಕಟಗೊಳ್ಳುತ್ತಿದೆ,ಹಾಗೂ ಇದರಲ್ಲಿಯೇ ಅಂತ್ಯಗೊಳ್ಳಲಿದೆ. ಎಲ್ಲಾ ಬುದ್ಧ-ಪುರುಷರ ಅನುಭವವು ಇದೇ ಆಗಿದೆ ಆ ಜಗತ್ತು ಮತ್ತೆಲ್ಲೂ ಇಲ್ಲ , ಆಕಾಶದಾಚೆ ಎಲ್ಲೂ ಇಲ್ಲ..ಆ ಜಗತ್ತು ಸಹ ‘ಈಗ-ಇಲ್ಲಿಯೇ ಇದೆ’;ಕೇವಲ ನಮ್ಮ gestalt ಬದಲಾಗುತ್ತಿದ್ದಂತೆ ‘ಅದು’ಬದಲಾಗುತ್ತದೆ; ಈಗ ಗೋಚರಿಸುತ್ತಿರುವ ಜಗತ್ತು ಅದೃಶ್ಯವಾಗುವುದು. ಆಕಸ್ಮಿಕವಾಗಿ ಪರಮಾತ್ಮನ ದರ್ಶನವಾಗುವುದು…ಬಾಲ್ಯದಲ್ಲಿನ ಆಟಿಕೆಯೊಳಿಗಿನ ಚಿತ್ರವಿರುವಂತೆ, ಅದರಲ್ಲಿ ಸ್ತ್ರೀ-ಪುರುಷರ ಚಿತ್ರ ಒಂದರಲ್ಲೇ ಇರುತ್ತದೆ..ಆದರೆ, ಯಾವಾಗ ಪುರುಷನ ಚಿತ್ರ ಕಾಣಿಸುತ್ತೊ ಆಗ ಸ್ತ್ರೀ ಚಿತ್ರ ಮಾಯವಾಗುವುದು,ಸ್ತ್ರೀ ಚಿತ್ರ ಕಾಣಿಸುತ್ತಿದ್ದಂತೆ ಪುರುಷನ ಚಿತ್ರ ಮಾಯವಾಗುವುದು. ನನಗೆ ಓಶೋ-ಸಂನ್ಯಾಸ ಎನ್ನುವುದು ಆ ಅದೃಶ್ಯ, ಇಂದ್ರೀಯಾ-ಅಗೋಚರ ಸ್ಥಿತಿಯನ್ನು ಪ್ರವೇಶಿಸುವುದಾಗಿದೆ..ಹಾಗೂ ಓಶೋ-ಸಂನ್ಯಾಸದ ಅಂತಿಮ ಚರಣ ಇದಾಗಿದೆ. ಆ ಅನಂತ-ಅಸೀಮ ಸ್ಥಿತಿಯಲ್ಲಿ ವಿಲೀನವಾಗಬೇಕಿದೆ. ಹತ್ತನೇ ಪ್ರಶ್ನೇ : “ ಓಶೋ ಕಮ್ಯೂನ್, ಓಶೋಧಾರ, ಓಶೋಧಾಮ ಅಥವಾ ಓಶೋ ತಪೋವನ ಕುರಿತು ಏನಾದರೂ ದೂರಿದೆಯೇ ? ಇದಕ್ಕೆ ಸಂಬಂಧಿಸಿದ ಗತಿವಿಧಾನಗಳ ಮತ್ತು ಕಾರ್ಯಕರ್ತರ ಕುರಿತು ತಮಗೆ ಒಮ್ಮತವಿದಯೇ ?” ಹೂಸೊಎವರ್ : ನನಗೆ ಯಾವುದೇ ದೂರಿಲ್ಲ. ಯಾರು ತಮ್ಮಿಂದ ಏನು ಸಾಧ್ಯವೋ ಅದನ್ನೆ ಮಾಡುತ್ತಾರೆ, ಯಾವುದು ಅವರಿಗೆ ಹಿಡಿಸುವುದೋ, ಯಾವುದು ಅವರ ಪೂರ್ವಗ್ರಹಕ್ಕೆ, ವಿಶ್ವಾಸಕ್ಕೆ, ಮಾನ್ಯತೆಗಳಗೆ ಅಥವಾ ಧಾರಣೆಗಳಿಗೆ ಅನುಕೂಲವಾಗುವುದೋ ಅದನ್ನೆ ಮಾಡುವರು. ಎಲ್ಲಾರು ತಮ್ಮ ವಿಚಾರಗಳನ್ನು, ಭಾವನೆಗಳನ್ನು ಸಂತೋಷಗೊಳಿಸಲು ವ್ಯಸ್ತರಾಗಿದ್ದಾರೆ.  ಎಲ್ಲರೂ ಹೀಗೆಯೇ ಇದ್ದಾರೆ, ತಮ್ಮ ವಿಚಾರಗಳನ್ನು, ಭಾವನೆಗಳನ್ನು ಸೊಂತೋಷಗೊಳಿಸುತ್ತ! ಈಶ್ವರ ಎಲ್ಲಾರ ಆತ್ಮಕೂ ಬೇಗನೇ ಶಾಂತಿ ಕೊಡಲಿ !

Edited 10 years ago
Reason: edit
LockSign in to reply to this thread